ಓ ನನ್ನ ಚೇತನ – O my spirit

ಕವಿ:ಕುವೆಂಪು‍ಆಂಗ್ಲ ತರ್ಜಮೆ: ರಂಗ ಸೀತಾರಾಮ್

Poet: Kuvempu; English translation: Ranga Sitaram


ಓ ನನ್ನ ಚೇತನ,

ಆಗು ನೀ ಅನಿಕೇತನ!

O my spirit,

Surpass thy limits!

.

ರೂಪ ರೂಪಗಳನು ದಾಟಿ,

ನಾಮ ಕೊಟಿಗಳನು ಮೀಟಿ,

ಎದೆಯ ಬಿರಿಯೆ ಭಾವದೀಟಿ,

ಓ ನನ್ನ ಚೇತನ,

ಆಗು ನೀ ಅನಿಕೇತನ.

Surpass all forms,

Rise above million identities,

As the sentimental spear cleaves your heart,

O my spirit,

Surpass thy limits!

ನೂರು ಮತದ ಹೊಟ್ಟು ತೂರಿ,

ಎಲ್ಲ ತತ್ವದೆಲ್ಲೆ ಮೀರಿ,

‍ನಿರ್ದಿಗಂತವಾಗಿ ಏರಿ,

ಓ ನನ್ನ ಚೇತನ,‍

ಆಗು ನೀ ಅನಿಕೇತನ.

.

Throw to wind the chaffs of hundred creeds,

Go beyond the confines of all tenets,

Rise like the boundless horizon,

O my spirit,

Surpass thy limits!

ಎಲ್ಲಿಯೂ ನಿಲ್ಲದಿರು,

ಮನೆಯನೆಂದು ಕಟ್ಟದಿರು,

ಕೊನೆಯನೆಂದು ಮುಟ್ಟದಿರು,

ಓ ಅನಂತವಾಗಿರು,

ಓ ನನ್ನ ಚೇತನ,

ಆಗು ನೀ ಅನಿಕೇತನ.

.

Stop not anywhere,

Build not bounding walls,

Reach not any finite end,

O be eternal,

O my spirit,

Surpass thy limits!

ಅನಂತ ತಾನ್ ಅನಂತವಾಗಿ,

ಆಗುತಿಹನೆ ನಿತ್ಯಯೋಗಿ,

ಅನಂತ ನೀನ್ ಅನಂತವಾಗು,

ಆಗು, ಆಗು, ಆಗು, ಆಗು,

ಓ ನನ್ನ ಚೇತನ,

ಆಗು ನೀ ಅನಿಕೇತನ.

The infinite remains eternal,

And is a perpetual mystic,

Infinite, thou shall be eternal,

Be, become, everlastingly,

O my spirit,

Surpass thy limits!

~*~‍

Leave a Reply