Caged Bird – ಪಂಜರದ ಪಕ್ಷಿ

The poem Caged Birds by Dr. Maya Angelou (American poet and activist 1928 – 2004) is perhaps the most famous poem representing Anti-slave Protests. The translation of this poem to Kannada was for me the most enthralling experiences of poetry translation so far.

Poem By Maya Angelou

Kannada Translation: Ranga Sitaram

ಕವಿ: ಮಯಾ ಆಂಜೆಲೌ

ಆಂಗ್ಲ ತರ್ಜಮೆ: ರಂಗ ಸೀತಾರಾಮ್


The free bird leaps

on the back of the wind

and floats downstream

till the current ends

and dips his wings

in the orange sun rays

and dares to claim the sky.

.

ಮುಕ್ತ ಹಕ್ಕಿಯೊಂದು ಗಾಳಿಯ

ಬೆನ್ನಮೇಲೇರಿತು, ‍ಕೆಳತೇಲಿತು

ಪವನದವೇಗ ತಗ್ಗಿದತನಕ, ಪುಕ್ಕ ಜಗ್ಗಿದತನಕ,

ನಸುಗೆಂಪಿನ ಸೂರ್ಯರಶ್ಮಿಯಲಿ

ಗಗನವೇ ತನ್ನದೆಂದು ಸವಾಲ್ಹಾಕುತಲಿ.

But a bird that stalks

down his narrow cage

can seldom see through

his bars of rage

his wings are clipped and

his feet are tied

so he opens his throat to sing.

.

ಮಗದೊಂದು ಪಕ್ಷಿಯಾದರೋ ಪುಟ್ಟಪಂಜರ‍ದಿ ಪರದಾಡಿತು

ಕಟಕಟೆಯಲಿ ಜೋಲುತ ತನ್ನ ರೋಷವ ತಾನೇ ಕಾಣದಾಯಿತು

ತುಂಡಿಸಿದ ರೆಕ್ಕೆಗಳು, ಕಟ್ಟಿಟ್ಟ ಕಾಲುಗಳೂ ಕಾರಣವಾಯಿತು

ಬಾಯಿ ತೆರೆದು ಹಾಡಹೊರಟಿತು.

The caged bird sings

with fearful trill

of the things unknown

but longed for still

and his tune is heard

on the distant hill

for the caged bird

sings of freedom.

.

ಅದಿರುತ‍ಲೆ ಹಾಡಿತು ಪಕ್ಷಿಯು ಪಂಜರದಿ

ತಿಳಿಯದ ವಿಚಾರಗಳ ಆದರೆ ಆಶಿಸಿದ ವಸ್ತುಗಳ

ಕೇಳಿಸಿತು ಅದರ ಹಾಡು ದೂರದ ಬೆಟ್ಟದಲಿ

ಹಾಡಿತದು ಸ್ವತಂತ್ರದ ಇಚ್ಛೆಯಲಿ‍.

The free bird thinks of another breeze

and the trade winds soft through the sighing trees

and the fat worms waiting on a dawn-bright lawn

and he names the sky his own.‍

.

ಚಿಂತಿಸಿತಾ ಮುಕ್ತಹಕ್ಕಿ ತಂಗಾಳಿಯಬಗ್ಗೆ ‍

‍ಮರಗಳಮಧ್ಯೆ ‍ಸುಯ್ಯೆನ್ನುವ ಸುಂಟರಗಾಳಿಯಬಗ್ಗೆ

‍ದಪ್ಪಹುಳುಗಳು ಬೆಳೆಗಿನ ಹುಲ್ಲುಹಾಸಿನಲಿ ಕಾದಿರುವಬಗ್ಗೆ

ತನ್ನದೇ ಮುಗಿಲೆಂದು ನೇಮಿಸಿತಂತೆ.

But a caged bird stands on the grave of dreams

his shadow shouts on a nightmare scream

his wings are clipped and his feet are tied

so he opens his throat to sing.

.

ಆದರೆ ನಿಂತಿತ್ತಾ ಪಂಜರದ ಪಕ್ಷಿ ಕನಸಿನ ಗೋರಿಯಮೇಲೆ

ಕೂಗಿತದರ ನೆರಳು ದುಃಸ್ವಪ್ನದಾ ‍‍ಚಿತ್ಕಾರದಮೇಲೆ

ತುಂಡಿಸಿದ ರೆಕ್ಕೆಗಳು, ಕಟ್ಟಿಟ್ಟ ಕಾಲುಗಳೂ ಕಾರಣವಾಯಿತು

ಬಾಯಿ ತೆರೆದು ಹಾಡಹೊರಟಿತು.‍

The caged bird sings

with a fearful trill

of things unknown

but longed for still

and his tune is heard

on the distant hill

for the caged bird

sings of freedom.

.

ಅದಿರುತ‍ಲೆ ಹಾಡಿತು ಪಕ್ಷಿಯು ಪಂಜರದಿ

ತಿಳಿಯದ ವಿಚಾರಗಳ ಆದರೆ ಆಶಿಸಿದ ವಸ್ತುಗಳ

ಕೇಳಿಸಿತು ಅದರಹಾಡು ದೂರದ ಬೆಟ್ಟದಲಿ

ಹಾಡಿತದು ಸ್ವತಂತ್ರದ ಇಚ್ಛೆಯಲಿ.

~*~

Leave a Reply