ಅಸಲಿ ಕವಿ: ಟಿ. ಪಿ. ಕೈಲಾಸಮ್
ನಕಲಿ ಕವಿ: ಆರ್. ಎಸ್. ತರಲೇಸಮ್ (ರಂಗ ಸೀತಾರಾಮ್)
ಸಂಗೀತ ಸಂಯೋಜನೆ: ವಾಣಿ ತರಲೇಸಮ್
—-
ನೋಡಿವ್ರ ನಂ ರಮೇಸಪ್ಪಾ
ಕೋಟಿಗೊಬ್ಬ ರಮೇಸಪ್ಪಾ
ಅವನ್ ಪದ ಆಡಿದ್ರೆ ಐಗಳೆಲ್ಲಾ
ಚಿಂಗ್… ಚಿಂಗ್-ಚಿಂಗ್.
ಅವನ್ ಸಿಂಗಾಪುರಕ್ ಬಂದಾಗವಾ
ಪದಯೋಳ್ತಾನೇ ಬಂದನಾವಾ
ಅದನ್ನೊಡಿ ಉಡ್ಗಿರೆಲ್ಲಾ
ಗುಂ ಗುಂ ಗುಂ.
.
ನೋಡಿವ್ರ ನಂ ರಮೇಸಪ್ಪಾ..
–
ಸಾಸ್ತ್ರಿಯ ಯೋಳೋ grace-ನವಾ ಓ
ನಂಜಿ ಆಡೋ craze-ನವಾ
ಸಾಸ್ತ್ರಿಯ ಯೋಳೋ grace-ನವಾ ಓ
ನಂಜಿ ಆಡೋ craze-ನವಾ
ಮೀರ್ಸಿದ್ ಹುಡುಗ್ರ್ ಊರಲ್ಲೇಇಲ್ಲಾ.
ಅವನ್ ಅಕ್ಕಿ ತೊಳೆಯೋ ಅಂದನವಾ
ಉಪ್ಪಿಟ್ ಮಾಡೋ ಚಂದನವಾ.
ಅವನ್ ಅಕ್ಕಿ ತೊಳೆಯೋ ಅಂದನವಾ
ಉಪ್ಪಿಟ್ ಮಾಡೋ ಚಂದನವಾ.
ನೋಡಿ ನೋಡಿ ಹಸ್ದಿವ್ನಿ – ನಾನೇನ್ ಹೇಳ್ಳಿ.
.
ನೋಡಿವ್ರ ನಂ ರಮೇಸಪ್ಪಾ
ಕೋಟಿಗೊಬ್ಬ ರಮೇಸಪ್ಪಾ
ಅವನ್ ಪದ ಆಡಿದ್ರೆ ಐಕಳೆಲ್ಲಾ
ಚಿಂಗ್… ಚಿಂಗ್-ಚಿಂಗ್.
.
ಅವನ್ ಸಿಂಗಾಪುರಕ್ ಬಂದಾಗವಾ
ಪದಯೋಳ್ತಾನೇ ಬಂದನಾವಾ
ಅದನ್ನೊಡಿ ಉಡ್ಗಿರೆಲ್ಲಾ
ಗುಂ ಗುಂ ಗುಂ.
.
ಚಿನ್ನದ್ ಗಂಡು ರಮೇಸಾ ಏ
ರನ್ನದ್ ಗಂಡು ರಮೇಸಾ ಓ
ಚಿನ್ನದ್ ಗಂಡು ರಮೇಸಾ ಏ
ರನ್ನದ್ ಗಂಡು ರಮೇಸಾ
ನಿನ್ನ ಗುಂಗ್ರು ಮೀಸೇ ಮಾತ್ರ – ಈಗ ನಾಪತ್ತೆ.
ನಿನ್ನ ಮಾತಿಗೆ ನಾವುಚ್ಚು
ನಿನ್ನ ಲಿಂಕಿಗೆ ನಾವ್ಮೆಚು
ನಿನ್ನ ಮಾತಿಗೆ ನಾವುಚ್ಚು
ನಿನ್ನ ಲಿಂಕಿಗೆ ನಾವ್ಮೆಚು
ರಮೇಸಾ.. ನಂ ಗುಲಗಂಜಿ.
.
