ವಿ‍ಜಿಯಕ್ಕನ್ ಯೊಗ – ರಂಗ ಸೀತಾರಾಮ್

ವಿಜಿಯಕ್ಕ ಯೊಳ್ತಾಳ್ ಕೇಳಿ

ಮಾಡ್ಬೆಕಂತೆ ಯೊಗ, ಮಾಡ್ಬೆಕಂತೆ ಯೊಗ

ಐಕ್ಳೆಲ್ಲ ಒಟ್ಟಿಗ್ ಬನ್ರೊ

ಮಾಡೋಣಂತೆ ಯೊಗ,  ಮಾಡೋಣಂತೆ ಯೊಗ.

.

ಒಳ್ಳೆಬುದ್ದಿ ಯೋಳ್ತಾಳ್ ಕೇಳಿ

ವಿಜಿಯಕ್ಕನ್ ಮಾತು

ವಿಜಿಯಕ್ಕನ್ ಮಾತು

ಐಕ್ಳೆಲ್ಲ ಒಟ್ಟಿಗ್ ಬನ್ರೊ

ಮಾಡೋಣಂತೆ ಯೊಗ,  ಮಾಡೋಣಂತೆ ಯೊಗ.

.

ದಿವ್ಸಾ ಎಲ್ಲ ಮೈದಿದ್ದಿರಿ

ಸಿಕ್ಕಿದೆಲ್ಲ ಕೈಗೆ

ಸಿಕ್ಕಿದೆಲ್ಲ ಕೈಗೆ

ರಾತ್ರಿಯೆಲ್ಲ ಹಾಕಿದ್ದಿರಿ

ಕ್ವಾಟ್ರು ಲೀಟ್ರು ಬಾಯ್ಗೆ

ವಾಟ್ರು ಲೀಟ್ರು ಬಾಯ್ಗೆ.

.

ಆಸಿಗೆಯಿಂದ ಯೋಳಕಿಲ್ಲ

ಹೊಟ್ಟೆ ಗುರಗುರ ಅಂತು

ಹೊಟ್ಟೆ ಗುರಗುರ ಅಂತು

ಅಲ್ಲುಗಿಲ್ಲು ಉಜ್ಜಕಿಲ್ಲ

ಬಟ್ಟ್ರು ಓಟ್ಲಲಿ ಆಜರು

ಬಟ್ಟ್ರು ಓಟ್ಲಲಿ ಆಜರು.

.

ಡಜನ್ ಗಟ್ಲೆ ಇಡ್ಲಿ ವಡೆ

ಕೊಳಗತ್ತುಂಬ ಚಟ್ನಿ

ಕೊಳಗತ್ತುಂಬ ಚಟ್ನಿ

ಸುರಿಯೋ ಸಾಂಬಾರ್ ವಂದಿಶ್ಟನ್ನ

ಬಾರೀ ಅಸ್ದೈತ್ ವೊಟ್ಟೆ

ಬಾರೀ ಅಸ್ದೈತ್ ವೊಟ್ಟೇ.

.

ಯಾತ್ಕೂ ಇರಲಿ ಕೊನೆಗೆ ಅಂತ

ಒಂದೆರೆಡು ಸೆಟ್ ದೋಸೆ

ಒಂದೆರೆಡು ಸೆಟ್ ದೋಸೆ

ಮನೆಗೋಗೋ ದಾರಿನಲ್ಲಿ

ಶೆಟ್ಟಿ ಅಂಗಡಿ ಚುರ್ಮುರಿ

ಶೆಟ್ಟಿ ಅಂಗಡಿ ಚುರ್ಮುರಿ.

.

ನೆತ್ತಿ ಮೇಲೆ ಸೂರ್ಯ ಬಂದ

ಓಟ ಮಾಡೋ ಟೇಮು

ಓಟ ಮಾಡೋ ಟೇಮು

ಅವ್ವಾ ಮಾಡೋಳ್ ಬಾರೊ ಬೇಗ

ಇಟ್ಟು ಕೊಳಿ ಸಾರು

 ಇಟ್ಟು ಕೊಳಿ ಸಾರು.

.

ಒಟ್ಟೆ ಬಿರಿಯ ತಿಂದು ತೇಗಿ

ಕಂಬ್ಳಿ ತಗಂಡ್ ಬಾರೋ

ಕಂಬ್ಳಿ ತಗಂಡ್ ಬಾರೋ

ತಾಸು ಮನಗಕ್ಕಿಲ್ಲದೆ ನಂಗೆ

ಕರ್ಗಕ್ಕಿಲ್ಲ ಸೋರು

ಕರ್ಗಕ್ಕಿಲ್ಲ ಸೋರು.

.

ಕತ್ಲೆ ಆಯ್ತು ದೀಪ ಓಯ್ತು

ಬ್ರಾಂದಿ ಶಾಪಲ್ ಸಾಲು

ಬ್ರಾಂದಿ ಶಾಪಲ್ ಸಾಲು

ಬೇಗ ನಡೀರೋ ಐಕ್ಳೆ ನೀವು

ಕಳ್ ಬಟ್ಟಿ ಪಾಲು

ಕಳ್ ಬಟ್ಟಿ ಪಾಲು.

.‍

ಇದರ ಮಧ್ಯ ಎಲ್ ಸಾದ್ಯ

ವಿಜಯಕ್ಕನ್ ಯೊಗ

ವಿಜಯಕ್ಕನ್ ಯೊಗ

ಅನ್ ಬೇಡ್ರೋ ಬಡ್ಡಿ ಮಕ್ಳ

ನಾಚಿಗೆ ಆಗಕಿಲ್ವ

ನಾಚಿಗೆ ಆಗಕಿಲ್ವ.

.

ಭೋಗ ಯೋಗ ಸಂಭೊಗ

ಎಲ್ಲಾ ದೇಹಕ್ ಬೇಕು

ಎಲ್ಲಾ ದೇಹಕ್ ಬೇಕು

ಪರ್ಕುತಿ ನಿಯಮ ಮರೀ ಬೇಡ್ರೋ

ಇದೇ ಈಸ್ವರನ್ ಗುಟ್ಟು

ಇದೇ ಈಸ್ವರನ್ ಗುಟ್ಟು.

.

ಪರ್ವತಾಸನ ಸಿರ್ಸಾಸನ

ಎಲ್ಲಾ ನೀವು ಮಾಡ್ರಿ

ಎಲ್ಲಾ ನೀವು ಮಾಡ್ರಿ

ದ್ರುಷ್ಟಿ ನೆಟ್ಟಗಿಟ್ಟು ವಸಿ

ದ್ಯಾನ ಮಾಡಿ ಐಕ್ಳ

ದ್ಯಾನ ಮಾಡಿ ಐಕ್ಳ.

.

ಇಲ್ದೆ ಓದ್ರೆ ಕೊನೆಗೆ ನಮ್ಗೆ

ಶವಾಸನನೆ ಕಡೆ

ಶವಾಸನನೆ ಕಡೆ

ಐಕ್ಳ ಒಟ್ಟೀಗೆ ಬನ್ರೋ ನೀವು

ಮಾಡೊಣಂತೆ ಯೋಗ

ಮಾಡೊಣಂತೆ ಯೋಗ.

.

ವಿಜಿಯಕ್ಕ ಯೊಳ್ತಾಳ್ ಕೇಳಿ

ಮಾಡ್ಬೆಕಂತೆ ಯೊಗ, ಮಾಡ್ಬೆಕಂತೆ ಯೊಗ

ಐಕ್ಳೆಲ್ಲ ಒಟ್ಟಿಗ್ ಬನ್ರೊ

ಮಾಡೋಣಂತೆ ಯೊಗ,  ಮಾಡೋಣಂತೆ ಯೊಗ.

~*~

Leave a Reply