KANNADA POEM: ಕುನ್ನಿ ಮತ್ತು ಚಿಟ್ಟೆ

Ranga Sitaram – ರಂಗ ಸೀತಾರಾಮ್

ಚಿಟ್ಟೆಯೊಂದು ಹಾರಿ

ಬಂದು ಮೂಗತುದಿ ಕುಳಿತುಕೊಂಡು

ಕೇಳಿತದು: ಏನು ಕುನ್ನಿ ವಿಶೇಷವೇನು

ಅಪರೂಪದಿ ಆಡಬಂದಿರುವೆ?

.

ಅಯ್ಯೋ ಸಖಿ ಪಾತರಗಿತ್ತಿ

ಹೇಳಲೇಕೆ ನನ್ನ ಬವಣೆ ಸುತ್ತಿ

ಅಕ್ಕ ತಮ್ಮರಿಬ್ಬರು ಓದಿಬರೆಯಲೆಂದು

ದೇಶದಾಚೆ ಹೋದರಲ್ಲ ವಿಷಯತಿಳಿಯದೆ?

.

ಈಗ ನನ್ನೊಡೆ ಆಡಲಾರು?

ಕಾಡಿಸಿ ನನ್ನ ಕೆರಳಿಸುವವರಾರು?

ಮುದ್ದುಮಾಡಿ ಕುಣಿಸಿವವರಾರು?

ಯೋಚಿಸಿ ಬಹಳ ನೊಂದಿರುವೆ.

.

ಅಯ್ಯೋ ಪಾಪ ಎಂತ ತಾಪ

ತಿಳಿಯಿತು ನಿನ್ನ ಶೋಕಸಂಕಟ

ಯೋಚಿಸಬೇಡ ಶ್ವಾನ ಮಿತ್ರ

ಬಹಳ ನೊಂದಿರುವೆ.

.

ಅಮ್ಮಅಪ್ಪ ಮುದ್ದಿಸವರು

ಅಕ್ಕತಮ್ಮ ಓದು ಮುಗಿಸಿ

ತಿರುಗಿ ಬಂದು ನಿನ್ನ ಸೇರ್ವರು

ಅಲ್ಲಿಯತನಕ ನನ್ನಕೂಡ ಆಡ ಬರುವೆಯಾ?

~*~

Leave a Reply