- Kannada Poem
ನಯನ ತಾರಾ ನಯನ ತಾರಾ
~~~~~~~~~~~~~~~~~
ನಯನ ತಾರಾ ನಯನ ತಾರಾ
ನಮ್ಮ ಮುದ್ದಿನ ನಯನ ತಾರಾ
ಅಚ್ಚು ಮೆಚ್ಚಿನ ನಯನ ತಾರಾ
ಹುಟ್ಟು ಹಬ್ಬದ ಹರ್ಷ ತಾರಾ II
.
ಕಣ್ಣು ಕಾಂತಿಯ ನಯನ ತಾರಾ
ತೀಕ್ಷ್ಣ ಮೂಗಿನ ತುಂಟಿ ಬಾರಾ
ಕೇಶ ರಾಶಿಯು ಹಾಸಿ ಹರಡುವ
ಚುರುಕು ಮಾತಿನ ನಯನ ತಾರಾ II
.
ಹುರುಪು ಮನಸಿನ ನಯನ ತಾರಾ
ತ್ವರಿತ ಚುರುಕಿನ ಸಿರಿಯಾ ತಾರಾ
ತುಂಟು ಮಾತಿನ ನಯನ ತಾರಾ
ಕೋಪ ಬಂದರೆ ತುಂಬಾ ಖಾರಾ II
.
ಅನೇಕ ಭಾಷೆಯ ನಯನ ತಾರಾ
ಅತಿ ಪ್ರತಿಬೆಯ ನಯನ ತಾರಾ
ಹಾಡಿ ನಟಿಸುವ ನಯನ ತಾರಾ
ಹೆಮ್ಮೆ ಹುಟ್ಟಿಸುವ ನಯನ ತಾರಾ II
.
ಎಲ್ಲೇ ಹೋಗಲಿ ಅಲ್ಲೇ ಬೆಳಗುವ
ಹೊಮ್ಮಿ ಹೊಳೆಯುವ ಸ್ವರ್ಣಮ್ಬರಾ
ನಯನ ತಾರಾ ನಯನ ತಾರಾ
ಹುಟ್ಟು ಹಬ್ಬದ ಹರ್ಷ ತಾರಾ II
~~~***~~~
