Cuerpo de mujer – ಹೆಣ್ಣಿನ ತನು

Poema 1: Veinte Poemas de Amor y Una Cancíon Desesperada

 Poeta: Pablo Neruda

Kannada traducción: Ranga Sitaram

ಕವಿತೆ ೧: ಇಪ್ಪತ್ತು ಪ್ರೇಮ ಕವಿತೆಗಳು ಮತ್ತು ‍ಒಂದು ‍ಹತಾಶೆಯ ಹಾಡು

ಕವಿ: ಪಾಬ್ಲೊ ನೆರೂಡ‍

ಕನ್ನಡ ತರ್ಜುಮೆ – ರಂಗ ಸೀತಾರಾಮ್


Cuerpo de mujer, blancas colinas, muslos blancos,

te pareces al mundo en tu actitud de entrega.

Mi cuerpo de labriego salvaje te socava

y hace saltar el hijo del fondo de la tierra.

.

ಹೆಣ್ಣಿನ ತನು, ಶ್ವೇತಗಿರಿಗ‍ಳು, ಶುಕ್ಲತೊಡೆಗಳೂ

ಜಗತ್ತಿನಂ‍ತೆ ಕಾಣು‍ವೆ ಶರಣಾಗಿ ಮಲಗಿದ ನೀನು.

ನನ್ನ ಒಡ್ಡು ಒಕ್ಕಲಿಗನ ಮೈ ತೋಡಿತು ನಿನ್ನ,

ಹೊರಹಾರಿದ ತನಯ ಭೂಮಿಯಾಳದಿಂದ.‍

–

Fui solo como un túnel. De mí huían los pájaros

y en mí la noche entraba su invasión poderosa.

Para sobrevivirme te forjé como un arma,

como una flecha en mi arco, como una piedra en mi honda.

.

ಒಂಟಿಯಾದೆ ನಾ ಸುರಂಗದಂ‍‍ತೆ. ಹಾರಿಹೋದವಾ ಹಕ್ಕಿಗಳು ನನ್ನೆಡೆಯಿಂದ

ನನ್ನಾವರಿಸಿತು ರಾತ್ರಿ‍ ಆಕ್ರಮ‍ಣದಿಂದ.

ಬದುಕುಳಿಯಲು ಆಕರಿಸಿದೆ ಆಯುಧದಂ‍ತೆ ನಿನ್ನ,

ನನ್ನ ಬಿಲ್ಲಿನ ಬಾಣದಂತೆ, ನನ್ನ ಕವಣೆಯ ಕಲ್ಲಿನಂತೆ.

–

Pero cae la hora de la venganza, y te amo.

Cuerpo de piel, de musgo, de leche ávida y firme.

Ah los vasos del pecho! Ah los ojos de ausencia!

Ah las rosas del pubis! Ah tu voz lenta y triste!

.

ಸೇಡು ತೀರುವ ವೇಳೆಯಾಯಿತು‍, ಪ್ರೇಮಿಸುವೆ ನಿನ್ನ,

‍ಚರ್ಮ, ಪಾಚಿ, ಉತ್ಸುಕ ಮತ್ತು ಸ್ತಿರ ಹಾಲಿನ ದೇಹ.

ಆಹಾ ಥಾಲಿಯಂತ ಸ್ಥನಗಳು, ಆಹಾ ವಿರ‍ಹದ ಕಣ್ಣುಗಳು

‍ಆಹಾ ‍ಗುಲಾಬಿಯ ಜಘನ, ಅಹಾ‍ ನಿನ್ನ ಧ್ವನಿ ಧೀರ್ಗ ಹಾಗೂ ಖಿನ್ನ.

–

Cuerpo de mujer mía, persistiré en tu gracia.

Mi sed, mi ansia sin límite, mi camino indeciso!

Oscuros cauces donde la sed eterna sigue,

y la fatiga sigue, y el dolor infinito.

.

ನನ್ನ ಪ್ರಿಯತಮೆಯ ತನು, ನಿ‍ನ್ನ ಲಾವಣ್ಯ‍ದಲ್ಲಿ ಉಳಿಯು‍ವೆ.

‍ನನ್ನ ದಾಹ, ನನ್ನ ಹಂಬಲ, ನನ್ನ ‍ಅ‍ಧ್ರುಡ ಹಾದಿ!

‍ಅಂಧಕಾರದ ನದೀದಡಕ್ಕೆ ‍‍ಹರಿಯುವ ನಿರಂತರ ದಾಹ,

‍‍ದಣಿವು ಹಿಂಬಾಲಿ‍ಸಿತು, ಅನಂತ ನೋವೂ ಕೂಡ‍.‍

~*~

‍

 

Leave a Reply