‍Cien Sonetos de Amor: Soneto XLVIII ‍ – ನೂರು ಪ್ರೇಮ ಪದ್ಯಗಳು: ಪದ್ಯ ೪೮

 

El Poeta: Pablo Neruda

Traducción a Kannada: Ranganatha Sitaram‍

.

ಕವಿ: ಪಾಬ್ಲೊ ನೆರೂಡ

ಕನ್ನಡ ತರ್ಜುಮೆ: ರಂಗನಾಥ ಸೀತಾರಾಮ್

–

                                        

Dos amantes dichosos hacen un solo pan,

una sola gota de luna en la hierba,

dejan andando dos sombras que se reúnen,

dejan un solo sol vacío en una cama.

.

ಇಬ್ಬರು ಸಂತಸದ ಪ್ರೇಮಿಗಳು ಮಾಡಿದರು ಒಂದೇ ಅಡುಗೆ,

ಒಂಟಿ ಚಂದ್ರಬಿಂದುವೊಂದು ಹುಲ್ಲಿನಲಿ,

ಅವರು ನಡೆಯುತಲಿ ನೆರಳು ಹರಿಯಿತು ಜೊತೆಗೆ,

ಎದ್ದಾಗ ಒಂಟಿ ಸೂರ್ಯನ ಉಳಿಸಿದರು ಮಂಚದಮೇಲೆ.

.

De todas las verdades escogieron el día:

no se ataron con hilos sino con un aroma,

y no despedazaron la paz ni las palabras.

La dicha es una torre transparente.

.

ಎಲ್ಲಾ ‍ಸತ್ಯಗಳಲ್ಲಿ ಆರಿಸಿದರು ಆದಿನವ,

ಹಿಡಿದರು ಅದನು ಹಗ್ಗದಿಂದಲ್ಲ ಕುಸುಮದಿಂದ,

‍ಶಾಂತಿಯ ಮುರಿಯಲಿಲ್ಲ, ಪದಗಳ ‍ಒಡೆಯಲಿಲ್ಲ,

ಅವರ ಆನಂದ ಒಂದು ‍ಪಾರದರ್ಶಕ ಗೋಪುರ.‍

.

El aire, el vino van con los dos amantes,

la noche les regala sus pétalos dichosos,

tienen derecho a todos los claveles.

‍ಪವನ ಮತ್ತು ಪಾನ ಅವರ ಜೊತೆಗೂಡಿತು.

ರಾತ್ರಿಯಲಿ ವಿನೋದಿಸಿತು ತನ್ನ ಆನಂದದಳಗಳಲಿ.

‍ಹಳದಿಹೂಗಳ ಪಡೆಯಲು ಅವರಿಗಿದೆ ಹಕ್ಕು.

.

Dos amantes dichosos no tienen fin ni muerte,

nacen y mueren muchas veces mientras viven,

tienen la eternidad de la naturaleza.

.

ಆ ಸಂತಸದ ಪ್ರೇಮಿಗಳಿಗಿಲ್ಲ ಅಂತ್ಯ ಅಥವ ಮ್ರುತ್ಯು,

ಹುಟ್ಟುವರು ಮಡೆಯುವರು ಅನೇಕಭಾರಿ ಬದುಕಿರುವಾಗವರು,

ಅವರಿಗಿದೆ ಅನಂತ ನೈಜಜೀವನ.

                     ~~*~~

Leave a Reply