Cien Sonetos de Amor: Soneto XI – ನೂರು ಪ್ರೇಮ ಪದ್ಯಗಳು: ಪದ್ಯ ೧೧ April 20, 2017 Ranganatha Sitaram Spanish to Kannada, Uncategorized Leave a comment El Poeta: Pablo Neruda Traducción a Kannada: Ranganatha Sitaram . ಕವಿ: ಪಾಬ್ಲೊ ನೆರೂಡ ಕನ್ನಡ ತರ್ಜುಮೆ: ರಂಗನಾಥ ಸೀತಾರಾಮ್ — Tengo hambre de tu boca, de tu voz, de tu pelo y por las calles voy sin nutrirme, callado, no me sostiene el pan, el alba me desquicia, busco el sonido líquido de tus pies en el día. . ಹಂಬಲಿಸುವೆ ನಾ ನಿನ್ನ ತುಟಿಗೆ, ನಿನ್ನ ಧ್ವನಿಗೆ, ನಿನ್ನ ಕೇಶರಾಶಿಗೆ ಮೌನದಿ ಸುತ್ತಾಡುವೆ ನಾ ಹಸಿದು, ಬೀದಿಬೀದಿಗಳಲ್ಲಿ, ರೊಟ್ಟಿ ನನ್ನ ಸುಧಾರಿಸದು, ಹಗಲು ಹಥಾಯಿಸಿತು, ಹುಡುಕುವೆ ನಿನ್ನ ಹೆಜ್ಜೆಯ ಸರಾಗಸದ್ದಿಗೆ ದಿನನಿತ್ಯ. . Estoy hambriento de tu risa resbalada, de tus manos color de furioso granero, tengo hambre de la pálida piedra de tus uñas, quiero comer tu piel como una intacta almendra. . ಹಸಿದಿರುವೆ ನಾ ನಿನ್ನ ನಯವಾದ ನಗೆಗೆ, ಬಿರುಸಾದ ಫಸಲುಬಣ್ಣದ ಕೈಗಳಿಗೆ, ಹಾಥೊರೆಯುವೆ ನಿನ್ನ ಬಿಳಿಕಲ್ಲಿನ ಬೆರಳುಗಳಿಗೆ, ತಿನ್ನಬಯಸುವೆ ನಿನ್ನ ತೊಗಲನು ಪೂರ್ಣಬಾದಾಮಿಯಂತೆ. . Quiero comer el rayo quemado en tu hermosura, la nariz soberana del arrogante rostro, quiero comer la sombra fugaz de tus pestañas y hambriento vengo y voy olfateando el crepúsculo buscándote, buscando tu corazón caliente como un puma en la soledad de Quitratúe. . ತಿನ್ನಲಿಷ್ಟ ನಿನ್ನ ಸೊಗಸುದೇಹದಿ ಹೊರಹೊಮ್ಮುವ ಸೂರ್ಯರಶ್ಮಿಯನು, ನಿನ್ನ ಹೆಮ್ಮೆಮುಖದ ಸ್ವತಂತ್ರ ನಾಸಿಕವನು, ತಿನ್ನಬಯಸುವೆ ನಿನ್ನ ಕಣ್ಣುರೆಪ್ಪೆಯ ಕ್ಷಣಿಕನೆರಳನು ಹಸಿದು ಶತಪತ ಸುತ್ತುವೆ ಮುಸ್ಸಂಜೆಯನು ಮೂಸುತ ಬೇಟೆಯಾಡುವೆ ನಿನ್ನ ಬಿಸಿಹ್ರುದಯಕ್ಕಾಗಿ ಖಾಲಿ ಕಿಟ್ರಟುವೆಯ ಕಾಡುಬೆಕ್ಕಿನ ಮಾದರಿ. ~*~ Share this: Share on X (Opens in new window) X Share on Facebook (Opens in new window) Facebook More Share on LinkedIn (Opens in new window) LinkedIn Share on Pinterest (Opens in new window) Pinterest Like Loading... Related