Poema 3: Ah vastedad de pinos – ಕವಿತೆ ೩: ಆಹಾ ದೇವದಾರು ವ್ರುಕ್ಶ ವಿಸ್ತಾರ May 2, 2017 Ranganatha Sitaram Spanish to Kannada, Uncategorized Leave a comment Poema 3: Veinte Poemas de Amor y Una Cancíon Desesperada Poeta: Pablo Neruda Kannada traducción: Ranga Sitaram ಕವಿತೆ ೩: ಇಪ್ಪತ್ತು ಪ್ರೇಮ ಕವಿತೆಗಳು ಮತ್ತು ಒಂದು ಹತಾಶೆಯ ಹಾಡು ಕವಿ: ಪಾಬ್ಲೊ ನೆರೂಡ ಕನ್ನಡ ತರ್ಜುಮೆ – ರಂಗ ಸೀತಾರಾಮ್ Ah vastedad de pinos, rumor de olas quebrándose, lento juego de luces, campana solitaria, crepúsculo cayendo en tus ojos, muñeca, caracola terrestre, en ti la tierra canta! – ಆಹಾ ದೇವದಾರು ವ್ರುಕ್ಶ ವಿಸ್ತಾರ, ಚದುರುವ ಅಲೆಗಳ ಗುಸುಗುಸು, ಬೆಳಕಿನ ಮಂದ ಆಟ, ಒಂಟಿ ಗಂಟೆ, ಕಣ್ಣಲಿ ಬೀಳುವ ನಸುಬೆಳಕು, ಆಟದ ಬೊಂಬೆ, ನೆಲಶಂಕ, ನಿನ್ನಲಿ ಹಾಡುವುದು ಭೂಮಿ! – En ti los ríos cantan y mi alma en ellos huye como tú lo desees y hacia donde tú quieras. Márcame mi camino en tu arco de esperanza y soltaré en delirio mi bandada de flechas. – ಹಾಡುವವು ನದಿಗಳು ನಿನ್ನಲಿ, ಹೊಕ್ಕುವುದು ನನ್ನಾತ್ಮ ಅವುಗಳಲಿ ಎಲ್ಲಿ ಬೇಕೊ ನಿನಗೆ, ಹೇಗೆ ಬೇಕೊ ಹಾಗೆ. ಕಳಿಸು ನನ್ನ ದಾರಿಗೆ ನಿನ್ನ ಆಶಾ ಬಿಲ್ಲನು ಬಿಡಿಸುವೆ ಉದ್ರೇಕದಲಿ ನನ್ನ ಬಾಣದ ಹಿಂಡನು. - En torno a mí estoy viendo tu cintura de niebla y tu silencio acosa mis horas perseguidas, y eres tú con tus brazos de piedra transparente donde mis besos anclan y mi húmeda ansia anida. – ಸುತ್ತಲೂ ಕಾಣುವುದು ನಿನ್ನ ಸೊಂಟದ ಮಂಜು ನಿನ್ನ ಮೌನ ಕಾಡಿತು ನನ್ನ ತೊಳಲಾಟದಲಿ; ಪಾರದರ್ಶಕ ಕಲ್ಲಿನ ಕೈಗಳ ನಿನ್ನಲಿ ನನ್ನ ಮುತ್ತು ಹಿಡಿಗಟ್ಟ್ಟಿತು, ತೇವದ ತೆವಲು ಗೂಡುಕಟ್ಟಿತು. - Ah tu voz misteriosa que el amor tiñe y dobla en el atardecer resonante y muriendo! Así en horas profundas sobre los campos he visto doblarse las espigas en la boca del viento. - ಆಹಾ ನಿನ್ನ ನಿಗೂಢ ಧ್ವನಿಯಲಿ ಪ್ರೇಮದ ಘಂಟಾನಾದ ಮಾರ್ಧ್ವನಿಸುವ ಮಧ್ಯಾನದ ಅಂತ್ಯದಲಿ! ಹಾಗೆ ಕಂಡಿರುವೆ ಕಡುವೇಳೆಯಲಿ, ಹೊಲಗದ್ದೆಯಲಿ, ಗೋದಿಪೈರನು ಬಗ್ಗಿಸುವ ಗಾಳಿಯ ಘಂಟಾನಾದದಲಿ. ~*~ Share this: Share on X (Opens in new window) X Share on Facebook (Opens in new window) Facebook More Share on LinkedIn (Opens in new window) LinkedIn Share on Pinterest (Opens in new window) Pinterest Like Loading... Related