Poema 3: Ah vastedad de pinos – ಕವಿತೆ ೩: ಆಹಾ ದೇವದಾರು ‍ವ್ರುಕ್ಶ‍ ವಿಸ್ತಾರ

Poema 3: Veinte Poemas de Amor y Una Cancíon Desesperada

 Poeta: Pablo Neruda

Kannada traducción: Ranga Sitaram

ಕವಿತೆ ೩‍: ಇಪ್ಪತ್ತು ಪ್ರೇಮ ಕವಿತೆಗಳು ಮತ್ತು ‍ಒಂದು ‍ಹತಾಶೆಯ ಹಾಡು

ಕವಿ: ಪಾಬ್ಲೊ ನೆರೂಡ‍

ಕನ್ನಡ ತರ್ಜುಮೆ – ರಂಗ ಸೀತಾರಾಮ್


Ah vastedad de pinos, rumor de olas quebrándose, 

lento juego de luces, campana solitaria, ‍

crepúsculo cayendo en tus ojos, muñeca, 

caracola terrestre, en ti la tierra canta!

–

ಆಹಾ ದೇವದಾರು ‍ವ್ರುಕ್ಶ‍ ವಿಸ್ತಾರ, ಚದುರುವ ಅಲೆಗಳ ಗುಸುಗುಸು,

ಬೆಳಕಿನ ಮಂದ ಆಟ, ಒಂಟಿ ಗಂಟೆ,

‍‍ಕಣ್ಣಲಿ ಬೀಳುವ ನಸುಬೆಳಕು, ‍ಆಟದ ಬೊಂಬೆ,

ನೆಲಶಂಕ, ನಿನ್ನಲಿ ಹಾಡುವುದು ಭೂಮಿ!

–

En ti los ríos cantan y mi alma en ellos huye 

como tú lo desees y hacia donde tú quieras. 

Márcame mi camino en tu arco de esperanza 

y soltaré en delirio mi bandada de flechas. 

–

ಹಾಡುವ‍ವು ನದಿಗಳು ನಿನ್ನಲಿ, ‍ಹೊಕ್ಕುವುದು ನನ್ನಾತ್ಮ ಅವುಗಳಲಿ

ಎಲ್ಲಿ ಬೇಕೊ ನಿನಗೆ, ಹೇಗೆ ಬೇಕೊ ಹಾಗೆ.‍

‍ಕಳಿಸು ನನ್ನ ದಾರಿಗೆ ನಿನ್ನ ‍ಆಶಾ ಬಿಲ್ಲನು

ಬಿಡಿಸುವೆ ಉದ್ರೇಕದಲಿ ‍ ನನ್ನ ‍ಬಾಣದ ‍ಹಿಂಡನು.‍

‍-

En torno a mí estoy viendo tu cintura de niebla

y tu silencio acosa mis horas perseguidas,

y eres tú con tus brazos de piedra transparente

donde mis besos anclan y mi húmeda ansia anida.

–

ಸುತ್ತಲೂ ಕಾಣುವುದು ನಿನ್ನ ಸೊಂಟದ ಮಂಜು

ನಿನ್ನ ಮೌನ ‍‍‍ಕಾಡಿತು ನನ್ನ ತೊಳಲಾಟದಲಿ;

ಪಾರದರ್ಶಕ ಕಲ್ಲಿನ ಕೈಗಳ ನಿನ್ನಲಿ

ನನ್ನ ಮುತ್ತು ಹಿಡಿಗಟ್ಟ್ಟಿತು, ತೇವದ ‍ತೆವಲು ಗೂಡುಕಟ್ಟಿತು‍‍.

‍-

Ah tu voz misteriosa que el amor tiñe y dobla

en el atardecer resonante y muriendo!

Así en horas profundas sobre los campos he visto

doblarse las espigas en la boca del viento.

‍-

ಆಹಾ ನಿನ್ನ ನಿಗೂಢ ಧ್ವನಿಯಲಿ ‍ಪ್ರೇಮದ ಘಂಟಾನಾದ

‍‍ಮಾರ್ಧ್ವನಿಸುವ ಮಧ್ಯಾನದ ಅಂತ್ಯದಲಿ!

ಹಾಗೆ ಕಂಡಿರುವೆ ಕಡುವೇಳೆಯಲಿ, ಹೊಲಗದ್ದೆಯಲಿ,

‍ಗೋದಿಪೈರನು ಬಗ್ಗಿಸುವ ಗಾಳಿಯ ಘಂಟಾನಾದದಲಿ.

~*~

‍

‍

Leave a Reply