BESOS – ‍ಚುಂಬನಗಳು – Kisses

BESOS

Gabriela Mistral (Nobel Laureate)

‍ಚುಂಬನಗಳು

ಕವಿ: ಗಾಬ್ರಿಯೇಲ ಮಿಸ್ತ್ರಾಲ್ (ನೋಬೆಲ್ ಪದಕ ಪ್ರಸಿದ್ದೆ)

ಕನ್ನಡಕ್ಕೆ ತರ್ಜುಮೆ: ರಂಗ ಸೀತಾರಾಮ್

Kisses

Poet: Gabriela Mistral (Nobel Laureate)

English translation: Ranga Sitaram

—

Hay besos que pronuncian por sí solos

la sentencia de amor condenatoria,

hay besos que se dan con la mirada

hay besos que se dan con la memoria.

–

ಚುಂಬನಗಳಿವೆ ಅವು ತಾವೇ ಘೊಷಿಸುತ್ತವೆ

ಪ್ರೇಮದಂಡನೆಯ ಆಗ್ನೆಯನು,

ಚುಂಬನಗಳಿವೆ ಕುಡಿನೋಟದಿಂದ ಕೊಟ್ಟದ್ದು

ಚುಂಬನಗಳಿವೆ ಜ್ನಾಪಕಾರ್ಥವಾಗಿ ಇಟ್ಟದ್ದು.

–

Kisses there are that themselves announce

The sentencing of damnatory love,

Kisses there are, given with a fleeting look

Kisses there are, given with remembrance.

———————————————————————————-

Hay besos silenciosos, besos nobles

hay besos enigmáticos, sinceros

hay besos que se dan sólo las almas

hay besos por prohibidos, verdaderos.

–

ಮೌನ ಚುಂಬನಗಳಿವೆ, ಶ್ರೇಷ್ಠ ಚುಂಬನಗಳಿವೆ

ಒಗಟಿನ ಚುಂಬನಗಳಿವೆ, ಸಾಚಾ ಕೂಡ.

ಆತ್ಮದಿಂದ‍ ಕೊಟ್ಟ ಚುಂಬನಗಳಿವೆ

ನಿಶಿದ್ಧ ಚುಂಬನಗಳಿವೆ, ನಿಜ ಕೂಡ.

–

Silent kisses there are, noble ones too

Enigmatic kisses there are, sincere ones too.

Kisses there are from the soul

Taboo kisses there are, true ones too.

———————————————————————————-

Hay besos que calcinan y que hieren,

hay besos que arrebatan los sentidos,

hay besos misteriosos que han dejado

mil sueños errantes y perdidos.

–

ಸುಡುವ ಹಾಗೂ ಗಾಯಗೊಳಿಸುವ ಚುಂಬನಗಳಿವೆ,

ಭಾವನೆಗಳನು ಸೆಳೆಯುವ ಚುಂಬನಗಳಿವೆ,

ನಿಗೂಡ ಸಾವಿರಕನಸುಗಳ ಚುಂಬನಗಳಿವೆ

ಅವು ಕಳೆದುಹೋಗಿವೆ ಕೂಡ.

–

Kisses there are that scald and wound,

Kisses there are that snatch the senses,

Mysterious kisses there are that leave

Million dreams to wander and be lost.

———————————————————————————-

Hay besos problemáticos que encierran

una clave que nadie ha descifrado,

hay besos que engendran la tragedia

cuantas rosas en broche han deshojado.

–

ಸಮಸ್ಯಾ ಚುಂಬನಗಳಿವೆ, ಅವು ಸನ್ನೆಯನು

ಯಾರೂ ಗ್ರಹಿಸದಂತೆ ಸೆರೆಹಿಡಿದಿವೆ,

ದುರಂತವನು ಹುಟ್ಟಿಸುವ ಚುಂಬನಗಳಿವೆ ಅವು‍

ಎಷ್ಟೋಗುಲಾಬಿದಳಗಳನು ಕಿತ್ತುಹಾಕಿವೆ.

–

Problematic kisses there are, that capture

Secret codes that nobody deciphers,

Kisses there are that engender tragedy

So many roses have been left deflowered.

———————————————————————————-

Hay besos perfumados, besos tibios

que palpitan en íntimos anhelos,

hay besos que en los labios dejan huellas

como un campo de sol entre dos hielos.

–

ಸುಘಂದ ಚುಂಬನಗಳಿವೆ, ಉಗುರುಬೆಚ್ಚಗಿನ ಚುಂಬನಗಳಿವೆ

ಸಲಿಗೆಯ ಹಂಬಲದಿಂದ ಅವು ತುಡಿಯುತ್ತವೆ,

ಚುಂಬನಗಳಿವೆ ಅವು ತುಟಿಗಳ‍ಮೆಲೆ ಮುದ್ರೆಹಾಕುತ್ತವೆ

ಸೂರ್ಯನ ಮೈ ಎರಡು ಹಿಮಗಡ್ಡೆಗಳ ಮದ್ಯೆಯಿದ್ದಂತೆ.

–

Scented kisses there are, lukewarm ones too

That tremble with intimate longings,

Kisses there are that imprint tread marks on lips

Like the sun stuck in ice.

———————————————————————————-

Hay besos que parecen azucenas

por sublimes, ingenuos y por puros,

hay besos traicioneros y cobardes,

hay besos maldecidos y perjuros.

–

ಬಿಳಿ ನೈದಿಲೆಯಂತ ಚುಂಬನಗಳಿವೆ

ಅವು ಉದಾತ್ತ, ಮುಗ್ದ ಮತ್ತು ನಿರ್ಮಲ,

ವಿಶ್ವಾಸಘಾತಕ ಮತ್ತು ಹೇಡಿ ಚುಂಬನಗಳಿವೆ,

ಶಪಿತ ಹಾಗೂ ಸುಳ್ಳು ಚುಂಬನಗಳಿವೆ.

–

Kisses there are like white lilies

Sublime, naive and pure,

Treacherous kisses there are and cowardly ones,

Cursed kisses there are and misleading ones too.

———————————————————————————-

Judas besa a Jesús y deja impresa

en su rostro de Dios, la felonía,

mientras la Magdalena con sus besos

fortifica piadosa su agonía.

–

ಜೂಡನು ಏಸುವನು ಚುಂಬಿಸಿ ಮುದ್ರಿಸಿದನು

 ದೇವರ ಮುಖದಲ್ಲಿ ಅಪರಾದವನು,

ಆಗ ಮ್ಯಾಗ್ಡಲೀನಳು ಅವಳ ಚುಂಬನದಿ

ಕರುಣೆಯಿಂದ ಯಾತನೆಯನು ಇನ್ನೂ ಹೆಚ್ಚಿಸಿದಳು‍.

–

Judas kisses Jesus and leaves an imprint

Of perfidy on God’s face,

While Magdalene fortifies the agony

With her kiss.

———————————————————————————-

Desde entonces en los besos palpita

el amor, la traición y los dolores,

en las bodas humanas se parecen

a la brisa que juega con las flores.

–

ಆ ಕಾಲದಿಂದಲೇ ಚುಂಬನಗಳಲಿ

ಪ್ರೀ‍ತಿ, ದ್ರೋಹ ಮತ್ತು ನೋವು ಕಂಪಿಸುತ್ತವೆ,

ಮಾನವನ ಮದು‍ವೆಗಳಲ್ಲಿ ‍ಅದು

‍ಹೂಗಳಲ್ಲಿ ‍ಆಡುವ ನಸುಗಾಳಿಯಂತೆ ತೋರುತ್ತದೆ.

–

From those times, throb in kisses

Love, treachery and pain,

In weddings they seem like

A breeze that plays among flowers.

———————————————————————————-

Hay besos que producen desvaríos

de amorosa pasión ardiente y loca,

tú los conoces bien son besos míos

inventados por mí, para tu boca.

–

ಹುಚ್ಚು ತವಕದ ಪ್ರಣಯಭಾವನೆ

ಉನ್ಮಾದ ಉತ್ಪತ್ತಿಸುವ ಚುಂಬನಗಳಿವೆ,

ನಿನಗೆ ಚೆನ್ನಾಗಿ ಗೊತ್ತು ನನ್ನ ಮುತ್ತು

ನಿನ್ನ ತುಟಿಗಾಗಿ ನಾನು‍ ‍‍ಸ್ರುಶ್ಟಿಸಿದ್ದು.

‍-

Kisses there are that produce ravenous

Passion of love, ardent an‍d crazy,

How well you know my kisses

That I Invented for your mouth.

———————————————————————————-

Besos de llama que en rastro impreso

llevan los surcos de un amor vedado,

besos de tempestad, salvajes besos

que solo nuestros labios han probado.

–

ಜ್ವಾಲಾ ‍ಚುಂಬನಗಳ ಅಚ್ಚುಗಳು

ತೋರಿವೆ ನಿಷಿದ್ದಪ್ರೇಮದ ಚಿನ್ನೆಗಳನು,

ನಮ್ಮಿಬ್ಬರ ತುಟಿಗಳು ಮಾತ್ರ ರುಚಿಸಿವೆ

‍ಚಂಡಮಾರುತ ಚುಂಬನಗಳನು, ‍ಘೋರ ಚುಂಬನಗಳನು.

–

‍Kisses of flame that imprint tracks

Which carry traces of our forbidden love,

Only our lips have tasted those

Stormy kisses, savage kisses.

———————————————————————————-

¿Te acuerdas del primero…? Indefinible;

cubrió tu faz de cárdenos sonrojos

y en los espasmos de emoción terrible,

llenáronse de lágrimas tus ojos.

–

ಜ್ನಾಪಕವಿದೆಯೇ ಮೊದಲಭಾರಿ..? ‍ನಿರೂಪಿಸಲಾಗದು;

ರಂಗೇರಿತು ನಿನ್ನ ಮುಖಚಹರೆಯೆಲ್ಲ

‍ಆ ಭಾವೋದ್ವೇಗದ ತೀವ್ರ ‍ಸೆಳುವಿನಲಿ,

‍ತುಂಬಿಬಂದ ನಿನ್ನ ‍ಆನಂದಬಾಶ್ಪದಲಿ.

–

‍Remember the first time…? Undefinable;

Red blushes that it covered your face in

And in the spasms of those terrible emotions,

Filled were your eyes with tears.

———————————————————————————-

¿Te acuerdas que una tarde en loco exceso

te vi celoso imaginando agravios,

te suspendí en mis brazos… vibró un beso,

y qué viste después…? Sangre en mis labios.

–

ಜ್ನಾಪಕವಿದೆಯೇ ಒಂದು ಮಧ್ಯಾನದಲಿ ಅತಿಹುಚ್ಚಿನಲಿ

ತಿಳಿದೆ ‍ನಿನ್ನ ಮತ್ಸರದ ತಪ್ಪು ಕಲ್ಪನೆಗಳನು,

‍‍ಎತ್ತಿಹಿಡಿದೆ ನನ್ನ ಬಾಹುಗಳಲಿ‍…‍ ಕಂಪನದ ಚುಂಬನ,

‍ನಂತರ ಕಂಡೆ ಏನನು…? ನನ್ನ ತುಟಿಯ ರಕ್ತವನು.

–

Remember that afternoon in excess craziness

I saw you jealously imagining of wrongs,

‍I picked you up in my arms… the trembling kiss,

And what you saw then…? Blood on my lips.

———————————————————————————-‍

Yo te enseñé a besar: los besos fríos

son de impasible corazón de roca,

yo te enseñé a besar con besos míos

inventados por mí, para tu boca.

–

ನಾನೇ ಕಲಿಸಿದೆ ನಿನಗೆ ಮುತ್ತಿಡಲು: ‍ತಣ್ಣಗಿನ

ಭಾವಶೂನ್ಯ ಚುಂಬನ ಕಲ್ಲಿನ ಹ್ರುದಯದವು,

ನಾಕಲಿಸಿದೆ ನಿನಗೆ ಚುಂಬಿಸಲು

ನಿನ್ನ ತುಟಿಗಾಗಿ ನಾನೇ ಸ್ರುಶ್ಟಿಸಿದ ಮುತ್ತುಗಳಿಂದ.

–

I taught you to kiss: those cold kisses

Are from the unfeeling heart of stone,

I taught you to kiss with my kisses

That I invented, for your lips.

~*~

‍

Leave a Reply