Kannada Poem: ತನುವು ನಿನ್ನದು ಮನವು ನಿನ್ನದು

Poem by Kannada Poet Kuvempu,
English Translation: Ranga Sitaram
Watercolor 15×20 inches.

ಕವಿ: ಕುವೆಂಪು, ಆಂಗ್ಲ ತರ್ಜಮೆ: ರಂಗನಾಥ ಸೀತಾರಾಮ್

ತನುವು ನಿನ್ನದು ಮನವು ನಿನ್ನದು

ಎನ್ನ ಜೀವನ ಧನವು ನಿನ್ನದು

ನಾನು ನಿನ್ನವನೆಂಬ ಹೆಮ್ಮೆಯ

ತ್ರುಣವು ಮಾತ್ರವೇ ನನ್ನದು.

.

My whole being is for you

My mind yours too

My life’s wealth is yours

The pride that I’m yours

Is the only spec that is mine.

–

ನೀನು ಹೊಳೆದರೆ ನಾನು ಹೊಳೆವೆನು

ನೀನು ಬೆಳೆದರೆ ನಾನು ಬೆಳೆವೆನು

ನನ್ನ ಹರಣದ ಹರಣ ನೀನು

ನನ್ನ ಮರಣದ ಮರಣವು.

.

As you gleam, so I shine

As you grow, so I flourish

My debacle is thy defeat

My death, thy demise.

–

ನನ್ನ ಮನದಲಿ ನೀನೆ ಯುಕ್ತಿ

ನನ್ನ ಹ್ರುದಯದಿ ನೀನೆ ಭಕ್ತಿ

ನೀನೆ ಮಾಯಾ ಮೋಹ ಶಕ್ತಿಯು

ಎನ್ನ ಜೀವನ ಮುಕ್ತಿಯು.

.

‍You are the guile in my mind

And the devotion in my heart

You are the infatuating magical power‍

You are my life’s salvation.

~*~

2 comments

Leave a Reply