ರಂಗನಾಥ ಸೀತಾರಾಮ್
೧
ಏನು ಹೇಳಲಿ ನರ–ಇಂದ್ರನ ಮೋಡಿ
ಅವನ ಹೆಸರು ಭಕ್ತರ ಮನೆಮಾಡಿ
ಭಾಷಣ ಬಿಗಿದರೆ ಅವರೆಲ್ಲ ಶರಣು
ಆವೇಶ ಬಂದ ಭಕ್ತಿಯ ಕುರುಡು, ಮಂಕುಭಕ್ತ||
೨
ಅತಿ ಕುರುಡು ಭಕ್ತಿಯದು
ಬ್ರಮೆತುಂಬಿದ ಬುಡುಬುಡುಕೆ ನಾದ
ಇರುಳು ಮುಗಿಯದ ಸುಳ್ಳು
ಕಲ್ಪನಾ ವೇದ, ಮಂಕುಭಕ್ತ||
೩
ಧಾರ್ಮಿಕತೆಯ ಹುಚ್ಚು ಬ್ರಮೆಯಲಿ
ಹಿಂದುತ್ವವೆಂಬ ತಪ್ಪು ಕಲ್ಪೆಯಲಿ
ಅವೈಚಾರಿಕತೆಯ ಮೂಢನಂಬಿನಕೆಯಲಿ
ಅರ್ಥಹೀನ ಆಚರಣೆಗಳ ಬಿಡುಕಂದ, ಮಂಕುಭಕ್ತ||
