ಮಂಕುಭಕ್ತನ ಕಗ್ಗ 

ರಂಗನಾಥ ಸೀತಾರಾಮ್

೧ 

ಏನು ಹೇಳಲಿ ನರ–ಇಂದ್ರನ ಮೋಡಿ  

ಅವನ ಹೆಸರು ಭಕ್ತರ ಮನೆಮಾಡಿ 

ಭಾಷಣ ಬಿಗಿದರೆ ಅವರೆಲ್ಲ ಶರಣು 

ಆವೇಶ ಬಂದ ಭಕ್ತಿಯ ಕುರುಡು, ಮಂಕುಭಕ್ತ||

೨ 

ಅತಿ ಕುರುಡು ಭಕ್ತಿಯದು 

ಬ್ರಮೆತುಂಬಿದ ಬುಡುಬುಡುಕೆ ನಾದ

ಇರುಳು ಮುಗಿಯದ ಸುಳ್ಳು

ಕಲ್ಪನಾ ವೇದ, ಮಂಕುಭಕ್ತ||

೩ 

ಧಾರ್ಮಿಕತೆಯ  ಹುಚ್ಚು ಬ್ರಮೆಯಲಿ 

ಹಿಂದುತ್ವವೆಂಬ ತಪ್ಪು ಕಲ್ಪೆಯಲಿ  

ಅವೈಚಾರಿಕತೆಯ ಮೂಢನಂಬಿನಕೆಯಲಿ    

ಅರ್ಥಹೀನ ಆಚರಣೆಗಳ ಬಿಡುಕಂದ, ಮಂಕುಭಕ್ತ|| 

Leave a Reply