Megustas cuando callas – ನನಗಿಷ್ಟ ನಿನ್ನ ಮೌನ April 17, 2017 Ranganatha Sitaram Spanish to Kannada, Uncategorized Leave a comment Poema 15: Veinte Poemas de Amor y Una Cancíon Desesperada Poeta: Pablo Neruda Kannada traducción: Ranga Sitaram ಕವಿತೆ ೧೫: ಇಪ್ಪತ್ತು ಪ್ರೇಮ ಕವಿತೆಗಳು ಮತ್ತು ಒಂದು ಹತಾಶೆಯ ಹಾಡು ಕವಿ: ಪಾಬ್ಲೊ ನೆರೂಡ ಕನ್ನಡ ತರ್ಜುಮೆ – ರಂಗ ಸೀತಾರಾಮ್ ME gustas cuando callas porque estás como ausente, y me oyes desde lejos, y mi voz no te toca. Parece que los ojos se te hubieran volado y parece que un beso t e cerrara la boca. . ನನಗಿಷ್ಟ ನಿನ್ನ ಮೌನ ನೀನಿಲ್ಲದೇ ಇದ್ದಂತೆ, ನನ್ನ ಮಾತು ದೂರದಿಂದ ಕೇಳಿದಂತೆ, ನನ್ನ ಧ್ವನಿ ನಿನ್ನ ಮುಟ್ಟದಂತೆ. ಅನಿಸಿತು, ನಿನ್ನಕ್ಷಿಗಳು ಹಾರಿಹೊದಂತೆ ಮತ್ತನಿಸಿತು, ಮುತ್ತೊಂದು ನಿನ್ನ ತುಟಿಗಳನು ಮುಚ್ಚಿದಂತೆ. – Como todas las cosas están llenas de mi alma emerges de las cosas, llena del alma mía. Mariposa de sueño, te pareces a mi alma, y te pareces a la palabra melancolía. . ನನ್ನಾತ್ಮವೇ ಎಲ್ಲೆಲ್ಲೂ ತುಂಬಿದಂತೆ ಹೊರಹೊಮ್ಮುವೆ ನೀ ನನ್ನಾತ್ಮವನ್ನು ತುಂಬಿಕೊಂಡಂತೆ. ನೀನೇ ನನ್ನ ಆತ್ಮದಂತೆ, ಒಂದು ಕನಸಿನ ಚಿಟ್ಟೆಯಂತೆ, ದುಮ್ಮಾನವೆಂಬ ಪದದಂತೆ. – Me gustas cuando callas y estás como distante. Y estás como quejándote, mariposa en arrullo. Y me oyes desde lejos, y mi voz no te alcanza: déjame que me calle con el silencio tuyo. . ನನಗಿಷ್ಟ ನಿನ್ನ ಮೌನ, ನೀನು ದೂರದಲ್ಲಿದಂತೆ. ನಿನ್ನ ಶೊಕದ ಶಬ್ದದಂತೆ, ಪಾತರಗಿತ್ತಿಯೊಂದು ಪಾರಿವಾಳದ ಪಿಸುಮಾತಾದಿದಂತೆ. ನನ್ನ ದೂರದಮಾತು ನೀಕೇಳಿದಂತೆ, ನನ್ನ ಧ್ವನಿ ನಿನ್ನ ತಲುಪದೇ ಇದ್ದಂತೆ. ಬಿಡು ನನ್ನನ್ನು ನಿನ್ನ ಮೌನದಲ್ಲಿರುವಂತೆ. – Déjame que te hable también con tu silencio claro como una lámpara, simple como un anillo. Eres como la noche, callada y constelada. Tu silencio es de estrella, tan lejano y sencillo. . ಮಾತನಾಡಲೇ ನಾನಿನ್ನ ಮೌನದೊಡನೆ ಅದು ಬೆಳಗುವ ದೀಪದಂತೆ, ಸರಳವಾದ ಸುರುಳಿಯಂತೆ ನೀನೊಂದು ರಾತ್ರಿಯಂತೆ, ಸ್ತಭ್ದ ತಾರಾಪುಂಜದಂತೆ. ನಿನ್ನ ನಕ್ಷತ್ರದ ಮೌನ, ಅತಿ ದೂರ ಮತ್ತು ಎಷ್ಟು ನೇರ. – Me gustas cuando callas porque estás como ausente. Distante y dolorosa como si hubieras muerto. Una palabra entonces, una sonrisa bastan. Y estoy alegre, alegre de que no sea cierto. . ನನಗಿಷ್ಟ ನಿನ್ನ ಮೌನ ನೀನು ಇಲ್ಲಿರದಂತೆ. ದೂರ ದುಃಕಿತ ನೀನು ತೀರಿ ಹೋದ ಹಾಗಂತೆ. ಸಾಕು ನನಗೆ ಒಂದು ಪದ ಒಂದು ನಗು. ನಾನು ಸಂತುಷ್ಟ, ಸಂತುಷ್ಟ ಇದಾವುದೂ ನಿಜವಲ್ಲವೆಂಬ ನೆಮ್ಮದಿ. ~*~ Share this: Share on X (Opens in new window) X Share on Facebook (Opens in new window) Facebook More Share on LinkedIn (Opens in new window) LinkedIn Share on Pinterest (Opens in new window) Pinterest Like Loading... Related