Puedo escribir – ಬರೆಯಬಲ್ಲೆ

 

Poema 20: Veinte Poemas de Amor y Una Cancíon Desesperada

 Poeta: Pablo Neruda

Kannada traducción: Ranga Sitaram

ಕವಿತೆ ೨೦: ಇಪ್ಪತ್ತು ಪ್ರೇಮ ಕವಿತೆಗಳು ಮತ್ತು ‍ಒಂದು ‍ಹತಾಶೆಯ ಹಾಡು

ಕವಿ: ಪಾಬ್ಲೊ ನೆರೂಡ‍

ಕನ್ನಡ ತರ್ಜುಮೆ – ರಂಗ ಸೀತಾರಾಮ್


Puedo escribir los versos

más tristes esta noche.

.

ಬರೆಯಬಲ್ಲೆ ಈ ರಾತ್ರಿ

ಅತಿ ಶೋಕ ಕವಿತೆ.

–

Escribir, por ejemplo:

«La noche está estrellada,

y tiritan, azules,

los astros, a lo lejos.»

.

ಬರೆಯಬಲ್ಲೆ ಉದಾಹರಣೆಗೆ:

“ಇಂದಿರುಳು ತಾರಾಮಯ,

ನೀ‍ಲ ನಕ್ಷತ್ರಗಳ ದೂರದ

ಕಂಪನ.”

–

El viento de la noche

gira en el cielo y canta.

.

ನಸು ಗಾಳಿಯೊಂದು ಮುಗಿಲಲಿ

ಹಾಡಿತ್ತು, ಸುತ್ತಿ ತಿರುಗಿತ್ತು.

–

Puedo escribir los versos

más tristes esta noche.

Yo la quise, y a veces

ella también me quiso.

.

ಬರೆಯಬಲ್ಲೆ ಈ ರಾತ್ರಿ

ಅತಿ ಶೋಕ ಕವಿತೆ.

ಅವಳನು ಪ್ರೇಮಿಸಿದೆ, ಒಮ್ಮೊಮ್ಮೆ

ಅವಳೂ ಪ್ರೀತಿಸಿದಳು.

–

En las noches como ésta

la tuve entre mis brazos.

La besé tantas veces

bajo el cielo infinito.

.

ಈ ಬಗೆಯ ನಿಶೆಯಲ್ಲಿ ಅವಳು

ನನ್ನ ಬಾಹುಗಳಲ್ಲಿದ್ದಂತೆ,

ಅನಂತ ಆಕಾಶದಡಿಯ‍ಲ್ಲಿ

ಅಡಿಗಡಿಗೆ ಚುಂಬಿಸಿದಂತೆ.

–

Ella me quiso, a veces

yo también la quería.

Cómo no haber amado

sus grandes ojos fijos.

.

ಅವಳು ಪ್ರೀತಿಸಿದಳು, ಒಮ್ಮೊಮ್ಮೆ

ನಾನೂ ಪ್ರೇಮಿಸಿ‍ದೆ.

ಪ್ರಣಯಿಸದೆ ಹೇಗೆ ಸಾಧ್ಯ ಅವಳ

ಅಪಾರ ನಿಶ್ಚಲ ನೆeತ್ರಗಳನು.

–

Puedo escribir los versos

más tristes esta noche.

Pensar que no la tengo.

Sentir que la he perdido.

.

ಬರೆಯಬಲ್ಲೆ ಈ ರಾತ್ರಿ

ಅತಿ ಶೊಕ ಕವಿತೆ.

ನನ್ನವಳಲ್ಲವೆಂಬೋ ಯೊಚನೆ. ಅವಳ

ಕಳೆದುಕೊಂಡನೆಂಬೋ ಭಾವನೆ.

–

Oír la noche inmensa,

más inmensa sin ella.

Y el verso cae al alma

como al pasto el rocío.

.

ಆಲಿಸಲೆ ಅಪಾರ ರಾತ್ರಿಯನು, ಇನ್ನೂ

ಅಘಾದವಾಯಿತದು ಅವಳಿಲ್ಲದೆ.

ತಾಕಿತು ಕವಿತೆ ಆತ್ಮವನು

ಹುಲ್ಲನು ತಟ್ಟುವ ಹಿಮದಂತೆ.

–

Qué importa que mi amor

no pudiera guardarla.

La noche está estrellada

y ella no está conmigo.

.

ಏನು ಹೇಳಲಿ, ನನ್ನ ಪ್ರೀತಿ

ಅವಳನು ಇರಿಸಿಕೊಳಲಿಲ್ಲ.

ಇಂದಿರುಳು ತಾರಾಮಯ, ಆದರೆ

ನನ್ನ ಬಳಿ ಅವಳಿಲ್ಲ.

–

Eso es todo. A lo lejos alguien canta.

A lo lejos.

Mi alma no se contenta

con haberla perdido.

.

ಇನಿಷ್ಟೆ, ದೂರದಲಿ ಹಾಡುವರು

ಯಾರೋ. ದೂರದಲಿ.

ಇನ್ದಿರುಳು ತಾರಾಮಯ, ಆದರೆ

ನನ್ನ ಬಳಿ ಅವಳಿಲ್ಲ.

–

Como para acercarla

mi mirada la busca.

Mi corazón la busca,

y ella no está conmigo.

.

ನನ್ನ ದ್ರಿಷ್ಟಿ ಹುಡುಕಿತು

ಹತ್ತಿರ ಅವಳನು ತರಲು.

ನನ್ನ ಹ್ರುದಯ ತಡಕಿತು, ಆದರಿಲ್ಲ

ನನ್ನ ಬಳಿ ಅವಳು.

–

La misma noche que hace

blanquear los mismos árboles.

Nosotros, los de entonces,

ya no somos los mismos.

.

ಆ ರಾತ್ರಿ ಬೆಳದಿಂಗಳು

ಹೊಳಪಿಸಿದೆ ಮರಗಳನು

ಇನ್ನೂ.

ನಮ್ಮಿಬರ ಜೊತೆ ಮಾತ್ರ

ಇನ್ನುಳಿದಿಲ್ಲ ನೋಡು.

–

Ya no la quiero, es cierto,

pero cuánto la quise.

Mi voz buscaba el viento

para tocar su oído.

.

ಇನ್ನಿಲ್ಲ ಅವಳಲ್ಲಿ ಪ್ರೀತಿ, ನಿಜ

ಹಿಂದೆಷ್ಟು ಪ್ರೀತಿಸಿದ್ದೆ.

ಹುಡುಕಿತೀ ನನ್ನ ಧ್ವನಿ ಗಾಳಿಯಲಿ

ಸೋಕಲು ಅವಳ ಕಿವಿಯನ್ನು.

–

De otro. Será de otro.

Como antes de mis besos.

Su voz, su cuerpo claro.

Sus ojos infinitos.

.

ಪರಸ್ವತ್ತು. ಇನ್ನಾಕೆ ಪರಸ್ವತ್ತು.

ನಾ ಮುತ್ತಿಟ್ಟ ಮುನ್ನದ ಹಾಗೆ.

ಅವಳ ಶಾರೀರ. ಅವಳ ನಿರ್ಮಲ ಶರೀರ.

ಅವಳ ಅನಂತಾಕ್ಷಿಗಳು.

–

Ya no la quiero, es cierto,

pero tal vez la quiero.

Es tan corto el amor,

y es tan largo el olvido.

.

ಇನ್ನವಳ ಪ್ರೀತಿಸೆ. ಅದು ನಿಜ, ಪ್ರಾಯಶಃ

ಪ್ರೀತಿಸುವೆ.

ಒಲವು ಎಷ್ಟು ಅಲ್ಪ, ಮರೆವು

ಎಷ್ಟು ಧೀರ್ಘ.

–

Porque en noches como ésta

la tuve entre mis brazos,

Mi alma no se contenta

con haberla perdido.

.

ಈ ಬಗೆಯ ನಿಶೆಯಲ್ಲಿ ಅವಳು

ನನ್ನ ಬಾಹುಗಳಲ್ಲಿದ್ದಂತೆ,

ಆಕೆಯನು‍ ಕಳೆದುಕೊಂಡ ನನಾತ್ಮಕ್ಕೆ

ಇನ್ನಿಲ್ಲ ಸಂತ್ರುಪ್ತಿ.

–

Aunque éste sea el último dolor

que ella me causa,

y éstos sean los últimos versos

que yo le escribo.

.

ಇದೇ ನನ್ನ ಕಡೆಯ ನೋವು

ಅವಳಿಂದ ಅನುಭವಿಸಿದ್ದು.

ಇವೇ ನನ್ನ ಕಡೆಯ ಕವಿತೆಗಳು

ಅವಳಿಗಾಗಿ ಬರೆದದ್ದು.

~*~

Leave a Reply