Megustas cuando callas – ನನಗಿಷ್ಟ ನಿನ್ನ ಮೌನ

 

Poema 15: Veinte Poemas de Amor y Una Cancíon Desesperada

 Poeta: Pablo Neruda

Kannada traducción: Ranga Sitaram

ಕವಿತೆ ೧೫: ಇಪ್ಪತ್ತು ಪ್ರೇಮ ಕವಿತೆಗಳು ಮತ್ತು ‍ಒಂದು ‍ಹತಾಶೆಯ ಹಾಡು

ಕವಿ: ಪಾಬ್ಲೊ ನೆರೂಡ‍

ಕನ್ನಡ ತರ್ಜುಮೆ – ರಂಗ ಸೀತಾರಾಮ್


ME gustas cuando callas

porque estás como ausente,


y me oyes desde lejos,

y mi voz no te toca.

Parece que los ojos

se te hubieran volado

y parece que un beso t

e cerrara la boca.

.

ನನಗಿಷ್ಟ ನಿನ್ನ ಮೌನ

ನೀನಿಲ್ಲದೇ ಇದ್ದಂತೆ,

ನನ್ನ ಮಾತು ದೂರದಿಂದ ಕೇಳಿದಂತೆ,

ನನ್ನ ಧ್ವನಿ ನಿನ್ನ ಮುಟ್ಟದಂತೆ.

ಅನಿಸಿತು, ನಿನ್ನಕ್ಷಿಗಳು‍

ಹಾರಿಹೊದಂತೆ

ಮತ್ತನಿಸಿತು, ಮುತ್ತೊಂದು ನಿನ್ನ

ತುಟಿಗಳನು ಮುಚ್ಚಿದಂತೆ.

–

Como todas las cosas están

llenas de mi alma
emerges de

las cosas, llena del alma mía.

Mariposa de sueño,

te pareces a mi alma,

y te pareces a la palabra

melancolía.

.

ನನ್ನಾತ್ಮವೇ ಎಲ್ಲೆಲ್ಲೂ

ತುಂಬಿದಂತೆ

ಹೊರಹೊಮ್ಮುವೆ ನೀ ನನ್ನಾತ್ಮವನ್ನು

ತುಂಬಿಕೊಂಡಂತೆ. ‍

ನೀನೇ ನನ್ನ ಆತ್ಮದಂತೆ, ಒಂದು

ಕನಸಿನ ಚಿಟ್ಟೆಯಂತೆ,

ದುಮ್ಮಾನವೆಂಬ

ಪದದಂತೆ.

–

Me gustas cuando callas y

estás como distante.
Y estás

como quejándote, mariposa en

arrullo.
Y me oyes desde lejos,

y mi voz no te alcanza:
déjame

que me calle con el silencio

tuyo.

.

ನನಗಿಷ್ಟ ನಿನ್ನ ಮೌನ,

ನೀನು ದೂರದಲ್ಲಿದಂತೆ.

ನಿನ್ನ ಶೊಕದ ಶಬ್ದದಂತೆ,

ಪಾತರಗಿತ್ತಿಯೊಂದು ಪಾರಿವಾಳದ ಪಿಸುಮಾತಾದಿದಂತೆ.

ನನ್ನ ದೂರದಮಾತು ನೀಕೇಳಿದಂತೆ,

ನನ್ನ ಧ್ವನಿ ನಿನ್ನ ತಲುಪದೇ ಇದ್ದಂತೆ.

ಬಿಡು ನನ್ನನ್ನು ನಿನ್ನ‍

ಮೌನದಲ್ಲಿರುವಂತೆ.

–

Déjame que te hable también

con tu silencio
claro como una

lámpara, simple como un

anillo.
Eres como la noche,

callada y constelada.
Tu

silencio es de estrella, tan

lejano y sencillo.

.

ಮಾತನಾಡಲೇ ನಾನಿನ್ನ

ಮೌನದೊಡನೆ

ಅದು ಬೆಳಗುವ ದೀಪದಂತೆ,

ಸರಳವಾದ ಸುರುಳಿಯಂತೆ

‍ನೀನೊಂದು ರಾ‍ತ್ರಿಯಂತೆ, ಸ್ತಭ್ದ

ತಾರಾಪುಂಜದಂತೆ.

ನಿನ್ನ ನಕ್ಷತ್ರದ ಮೌನ, ಅತಿ

ದೂರ ಮತ್ತು ‍ಎಷ್ಟು ನೇರ.

–

Me gustas cuando callas

porque estás como

ausente.
Distante y dolorosa

como si hubieras muerto.
Una

palabra entonces, una sonrisa

bastan.
Y estoy alegre, alegre

de que no sea cierto.

.

ನನಗಿಷ್ಟ ನಿನ್ನ ಮೌನ

ನೀನು ಇಲ್ಲಿರದಂತೆ.

ದೂರ ದುಃಕಿತ ನೀನು

ತೀರಿ ಹೋದ ಹಾಗಂತೆ.

ಸಾಕು ನನಗೆ ಒಂದು ಪದ

ಒಂದು ನಗು.

ನಾನು ಸಂತುಷ್ಟ, ಸಂತುಷ್ಟ ಇದಾವುದೂ

ನಿಜವಲ್ಲವೆಂಬ ನೆಮ್ಮದಿ‍.

~*~

Leave a Reply