Puedo escribir – ಬರೆಯಬಲ್ಲೆ April 17, 2017 Ranganatha Sitaram Spanish to Kannada Leave a comment Poema 20: Veinte Poemas de Amor y Una Cancíon Desesperada Poeta: Pablo Neruda Kannada traducción: Ranga Sitaram ಕವಿತೆ ೨೦: ಇಪ್ಪತ್ತು ಪ್ರೇಮ ಕವಿತೆಗಳು ಮತ್ತು ಒಂದು ಹತಾಶೆಯ ಹಾಡು ಕವಿ: ಪಾಬ್ಲೊ ನೆರೂಡ ಕನ್ನಡ ತರ್ಜುಮೆ – ರಂಗ ಸೀತಾರಾಮ್ Puedo escribir los versos más tristes esta noche. . ಬರೆಯಬಲ್ಲೆ ಈ ರಾತ್ರಿ ಅತಿ ಶೋಕ ಕವಿತೆ. – Escribir, por ejemplo: «La noche está estrellada, y tiritan, azules, los astros, a lo lejos.» . ಬರೆಯಬಲ್ಲೆ ಉದಾಹರಣೆಗೆ: “ಇಂದಿರುಳು ತಾರಾಮಯ, ನೀಲ ನಕ್ಷತ್ರಗಳ ದೂರದ ಕಂಪನ.” – El viento de la noche gira en el cielo y canta. . ನಸು ಗಾಳಿಯೊಂದು ಮುಗಿಲಲಿ ಹಾಡಿತ್ತು, ಸುತ್ತಿ ತಿರುಗಿತ್ತು. – Puedo escribir los versos más tristes esta noche. Yo la quise, y a veces ella también me quiso. . ಬರೆಯಬಲ್ಲೆ ಈ ರಾತ್ರಿ ಅತಿ ಶೋಕ ಕವಿತೆ. ಅವಳನು ಪ್ರೇಮಿಸಿದೆ, ಒಮ್ಮೊಮ್ಮೆ ಅವಳೂ ಪ್ರೀತಿಸಿದಳು. – En las noches como ésta la tuve entre mis brazos. La besé tantas veces bajo el cielo infinito. . ಈ ಬಗೆಯ ನಿಶೆಯಲ್ಲಿ ಅವಳು ನನ್ನ ಬಾಹುಗಳಲ್ಲಿದ್ದಂತೆ, ಅನಂತ ಆಕಾಶದಡಿಯಲ್ಲಿ ಅಡಿಗಡಿಗೆ ಚುಂಬಿಸಿದಂತೆ. – Ella me quiso, a veces yo también la quería. Cómo no haber amado sus grandes ojos fijos. . ಅವಳು ಪ್ರೀತಿಸಿದಳು, ಒಮ್ಮೊಮ್ಮೆ ನಾನೂ ಪ್ರೇಮಿಸಿದೆ. ಪ್ರಣಯಿಸದೆ ಹೇಗೆ ಸಾಧ್ಯ ಅವಳ ಅಪಾರ ನಿಶ್ಚಲ ನೆeತ್ರಗಳನು. – Puedo escribir los versos más tristes esta noche. Pensar que no la tengo. Sentir que la he perdido. . ಬರೆಯಬಲ್ಲೆ ಈ ರಾತ್ರಿ ಅತಿ ಶೊಕ ಕವಿತೆ. ನನ್ನವಳಲ್ಲವೆಂಬೋ ಯೊಚನೆ. ಅವಳ ಕಳೆದುಕೊಂಡನೆಂಬೋ ಭಾವನೆ. – Oír la noche inmensa, más inmensa sin ella. Y el verso cae al alma como al pasto el rocío. . ಆಲಿಸಲೆ ಅಪಾರ ರಾತ್ರಿಯನು, ಇನ್ನೂ ಅಘಾದವಾಯಿತದು ಅವಳಿಲ್ಲದೆ. ತಾಕಿತು ಕವಿತೆ ಆತ್ಮವನು ಹುಲ್ಲನು ತಟ್ಟುವ ಹಿಮದಂತೆ. – Qué importa que mi amor no pudiera guardarla. La noche está estrellada y ella no está conmigo. . ಏನು ಹೇಳಲಿ, ನನ್ನ ಪ್ರೀತಿ ಅವಳನು ಇರಿಸಿಕೊಳಲಿಲ್ಲ. ಇಂದಿರುಳು ತಾರಾಮಯ, ಆದರೆ ನನ್ನ ಬಳಿ ಅವಳಿಲ್ಲ. – Eso es todo. A lo lejos alguien canta. A lo lejos. Mi alma no se contenta con haberla perdido. . ಇನಿಷ್ಟೆ, ದೂರದಲಿ ಹಾಡುವರು ಯಾರೋ. ದೂರದಲಿ. ಇನ್ದಿರುಳು ತಾರಾಮಯ, ಆದರೆ ನನ್ನ ಬಳಿ ಅವಳಿಲ್ಲ. – Como para acercarla mi mirada la busca. Mi corazón la busca, y ella no está conmigo. . ನನ್ನ ದ್ರಿಷ್ಟಿ ಹುಡುಕಿತು ಹತ್ತಿರ ಅವಳನು ತರಲು. ನನ್ನ ಹ್ರುದಯ ತಡಕಿತು, ಆದರಿಲ್ಲ ನನ್ನ ಬಳಿ ಅವಳು. – La misma noche que hace blanquear los mismos árboles. Nosotros, los de entonces, ya no somos los mismos. . ಆ ರಾತ್ರಿ ಬೆಳದಿಂಗಳು ಹೊಳಪಿಸಿದೆ ಮರಗಳನು ಇನ್ನೂ. ನಮ್ಮಿಬರ ಜೊತೆ ಮಾತ್ರ ಇನ್ನುಳಿದಿಲ್ಲ ನೋಡು. – Ya no la quiero, es cierto, pero cuánto la quise. Mi voz buscaba el viento para tocar su oído. . ಇನ್ನಿಲ್ಲ ಅವಳಲ್ಲಿ ಪ್ರೀತಿ, ನಿಜ ಹಿಂದೆಷ್ಟು ಪ್ರೀತಿಸಿದ್ದೆ. ಹುಡುಕಿತೀ ನನ್ನ ಧ್ವನಿ ಗಾಳಿಯಲಿ ಸೋಕಲು ಅವಳ ಕಿವಿಯನ್ನು. – De otro. Será de otro. Como antes de mis besos. Su voz, su cuerpo claro. Sus ojos infinitos. . ಪರಸ್ವತ್ತು. ಇನ್ನಾಕೆ ಪರಸ್ವತ್ತು. ನಾ ಮುತ್ತಿಟ್ಟ ಮುನ್ನದ ಹಾಗೆ. ಅವಳ ಶಾರೀರ. ಅವಳ ನಿರ್ಮಲ ಶರೀರ. ಅವಳ ಅನಂತಾಕ್ಷಿಗಳು. – Ya no la quiero, es cierto, pero tal vez la quiero. Es tan corto el amor, y es tan largo el olvido. . ಇನ್ನವಳ ಪ್ರೀತಿಸೆ. ಅದು ನಿಜ, ಪ್ರಾಯಶಃ ಪ್ರೀತಿಸುವೆ. ಒಲವು ಎಷ್ಟು ಅಲ್ಪ, ಮರೆವು ಎಷ್ಟು ಧೀರ್ಘ. – Porque en noches como ésta la tuve entre mis brazos, Mi alma no se contenta con haberla perdido. . ಈ ಬಗೆಯ ನಿಶೆಯಲ್ಲಿ ಅವಳು ನನ್ನ ಬಾಹುಗಳಲ್ಲಿದ್ದಂತೆ, ಆಕೆಯನು ಕಳೆದುಕೊಂಡ ನನಾತ್ಮಕ್ಕೆ ಇನ್ನಿಲ್ಲ ಸಂತ್ರುಪ್ತಿ. – Aunque éste sea el último dolor que ella me causa, y éstos sean los últimos versos que yo le escribo. . ಇದೇ ನನ್ನ ಕಡೆಯ ನೋವು ಅವಳಿಂದ ಅನುಭವಿಸಿದ್ದು. ಇವೇ ನನ್ನ ಕಡೆಯ ಕವಿತೆಗಳು ಅವಳಿಗಾಗಿ ಬರೆದದ್ದು. ~*~ Share this: Share on X (Opens in new window) X Share on Facebook (Opens in new window) Facebook More Share on LinkedIn (Opens in new window) LinkedIn Share on Pinterest (Opens in new window) Pinterest Like Loading... Related